ARVIN: ನನ್ನ ಮನೆಭೇಟಿಯು ಒಂದು ನೆನಪಲ್ಲಿ ಸವಿನೆನಪುಗಳನ್ನು ತುಂಬಿದಂತಾಗಿದ್ದುವು. ಏಕೆಂದರೆ ನನ್ನ ಬಾಲ್ಯದ ದಿನಗಳನ್ನು ಹಾಗೂ ಏಸುಸಭೆಯಲ್ಲಿ ಆದ ಅನುಭವಗಳನ್ನು ಇತರರಿಗೆ ಹಂಚುವ ಅವಕಾಶವಾಯಿತು. ಈ ಸುವರ್ಣ ಅವಕಾಶವು ನನ್ನ ಬಾಳಲ್ಲಿ ಹೊಸ ಚೇತನ ತಂದಿದೆ. ಈ ಭೇಟಿಯು ನನ್ನ ಮುಂದಿನ ಭವಿಷ್ಯಕ್ಕೆ ಆಧಾರಸ್ಥಂಭವಾಗಿದೆ. ನನ್ನ ಮನೆಭೇಟಿಯ ಉದ್ದೇಶವು ನನ್ನ ದೈವಕರೆಯನ್ನು ಪರೀಕ್ಷಿಸಲು ಹಾಗೂ ನನ್ನ ಮನೆಯವರಿಗೆ ಪೂರ್ಣ ರೀತಿಯ ಸಹಾಯ ಮಾಡಲು ನೆರವಾಯಿತು. ಈ ಉದ್ದೇಶಗಳನ್ನು ದೇವರ ಸಹಾಯದಿಂದ ಈಡೇರಿಸಿದ್ದೇನೆಂದು ಹೇಳಲು ಸಂತೋಷಪಡುತ್ತೇನೆ. ನನ್ನ ತಂದೆ-ತಾಯಿ ನನ್ನನ್ನು ಯೇಸುಸಭೆಗೆ ಸಂಪೂರ್ಣವಾಗಿ ನೀಡಿದ್ದಾರೆ ಹಾಗೂ ಈ ಅನುಭವದ ಮುಖಾಂತರ ನನ್ನ ಗುರಿಯು ನನಗೆ ಮನದಟ್ಟಾಗಿದೆ.
Wednesday, January 13, 2010
Home - A Treasure of Memories!
Subscribe to:
Post Comments (Atom)
No comments:
Post a Comment