ಪ್ರೀತಿಯ ರಾಜ್ಯೋತ್ಸವ - ಈ ದಿನವು ಕನ್ನಡಿಗರಿಗೆ ವಿಶೇಷವಾದ ದಿನ. ಕನ್ನಡ ನಾಡು, ಸಂಸ್ಕೃತಿಯನ್ನು ಹೊಗಳಿ ಗೌರವಿಸುವ ದಿನವಿದು. ನವಶಿಷ್ಯ ರೋಹನ್ ಈ ದಿನದ ವಿಶೇಷತೆಯನ್ನು "ನನ್ನ ಪ್ರೀತಿಯ ಕನ್ನಡ ನಾಡು" ಮುಖಾಂತರ ಸುಂದರವಾಗಿ ವರ್ಣಿಸುತ್ತಾನೆ.
ಕನ್ನಡದ ವೀರ ಪುತ್ರಪುತ್ರಿಯರೇ, ಭರತ ಮಣ್ಣಿನ ವೀರಪ್ರಜೆಗಳೇ, ಬನ್ನಿ ನಾವೆಲ್ಲರೂ ಸೇರಿ ಹಾಡೋಣ "ಕರ್ನಾಟಕ ರಾಜ್ಯೋತ್ಸವ." ಕಾಡು, ಜಲ ಸಂಪತ್ತು ಬೆಳೆಸಿರುವ ನಾಡಿದು, ಮಲೆನಾಡು, ಆಗುಂಬೆಗಳಂತಹ ಭವ್ಯ ತಾಣವಿದು, ಕನ್ನಡ ಮಾತೆಯ ಪೂಜಿಸಿ ಆರಾಧಿಸುವ ದೇಗುಲವಿದು, ಭರತ ಲೋಕದ ಪ್ರಕೃತಿಯ ಪ್ರೀತಿಯ ಕಣ್ಮಣಿಯಿದು. ಬೇಲೂರು, ಹಳೇಬೀಡುಗಳಂತಹ ಶಿಲ್ಪಗಳ ದೇಗುಲವಿದು, ಸಮುದ್ರಗಳ ಅಲೆಗಳ ಮೇಲೆ ಜೀವನ ನಡೆಸುವ ಬೆಸ್ತರ ನಾಡಿದು, ಕವಿ ಋಷಿಗಳು ಬೆಳೆಸಿ, ನೆಲೆಸಿರುವ ಪುಣ್ಯಕೋಟಿ ಕವನದ, ಕನ್ನಡಿಗರ ಹೋರಾಟದ ಫಲವಿದು "ಕರ್ನಾಟಕ ರಾಜ್ಯೋತ್ಸವ."
No comments:
Post a Comment