ಒಂದಾನೊಂದು ಕಾಲದಲ್ಲಿ ಭರತನು ಕಟ್ಟಿದ ನಾಡು
ಹಲವು ಜಾತಿ, ಧರ್ಮ, ಭಾಷೆಗಳ ಬೀಡು
ಎಲ್ಲರ ಮೈಮನ ಸೆಳೆಯುವ ಈ ಸುಂದರ ನಾಡು
ಅದುವೇ ಈ ನಮ್ಮ ಭಾರತ ನಾಡು
ಶಾಂತಿ-ಕ್ರಾಂತಿ, ಹಿಂಸೆ-ಅಹಿಂಸೆ ಎಂಬ ಬಲಿಷ್ಠ ಅಸ್ತ್ರದಿಂದ
ಹೊರದಬ್ಬಿದರು ಪರಕೀಯರನ್ನು ಈ ನಾಡಿನಿಂದ
ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದರು ನಮಗೆ
ಕಾಪಾಡಿ, ರಕ್ಷಿಸಿ ಆಡಳಿತವ ಮಾಡಿ ಎಂದು ಹೇಳಿದರುನಮಗೆ
ನಿಶಕ್ತಿಯಿಂದ ಬಳಲುತ್ತಿದೆ ಈ ನಾಡು ಭ್ರಷ್ಟಾಚಾರ ಎಂಬ ರೋಗದಿಂದ
ಈ ರೋಗ ಸೃಷ್ಟಿಯಾಗಿ ಹರಡುತ್ತಿರುವುದು ಯಾರಿಂದ?
ನಮ್ಮೆಲ್ಲರ ದುರಾಸೆ, ಸ್ವಾರ್ಥಕತೆಯ ಪಾಪದ ಕೊಡದಿಂದ
ನಮ್ಮಿಂದ ಭರ್ತಿಯಾದ ಈ ಪಾಪದ ಕೊಡ ನಾವೇ ದೂರ ಚೆಲ್ಲಬೇಕು
ಬನ್ನಿ, ಕೈ ಜೋಡಿಸಿ ಈ ಭ್ರಷ್ಟಾಚಾರ ಎಂಬ ಪಾಪದ ಕೊಡವನ್ನು ಕಿತ್ತೊಗೆಯಬೇಕು
ಪುನಃ ನಮ್ಮ ನಾಡಿನ ವೈಭವ ಸರ್ವದಿಕ್ಕುಗಳಲ್ಲಿ ಪ್ರಜ್ವಲಿಸಬೇಕು.
(ಈ ಕವನವನ್ನು ಬರೆದವರು ಜೋಯಲ್ ಸಂದೀಪ್)
No comments:
Post a Comment