WELCOME TO MOUNT ST JOSEPH. CONNECTING JESUITS AND FRIENDS

Saturday, July 16, 2011

ಪ್ರೀತಿಯ ಕಿಡಿಗಳು - Sparks of Love

ಭುವನದಲ್ಲಿ ಈ ಜೀವನ ದೇವರು ಕೊಟ್ಟಂತಹ ಪ್ರೀತಿಯ ವರದಾನ
ಹುಡುಕುವೆ
ಏತಕೆ ಆ ದೇವನ ಅಲೆಯುವ ಏತಕೆ ಅನುಕ್ಷಣ
ಕಣಕಣದಲ್ಲಿಹುದು ಆತನ ತನುಮನ
ಪ್ರೀತಿಸುವ
ಈ ಹೃದಯಕೆ ದ್ವೇಷದ ಹಗೆತನವೇಕೆ?
ಶಾಂತಿ
ಸಾರುವ ಈ ಶರೀರಕೆ ಹಿಂಸೆ ನೀಡುವ ದಾಹವೇಕೆ?
ಅಳುವ ಕಣ್ಣಲ್ಲಿ ಕೆಂಪು ಕಣ್ಣೀರು ಬಡವರ ದೀನರ ನಿಟ್ಟುಸಿರು
ಈ
ಕಣ್ಣಿನ ಕಣ್ಣೀರ ಒರೆಸುವವರಾರು? ಬಡವರ ದೀನರ ಸಂತೈಸುವವರಾರು?
ಯುವಕ ಯುವತಿಯರೇ ನೀವಾಗಿ ಬೆಂಕಿಯ ಕಿಡಿಗಳು
ಪ್ರೀತಿಯ
ಹಂಚಿರಿ ಈ ಜಗದೊಳು ಸಮತೆಯ ಸಾರಿರಿ ಈ ಲೋಕದೊಳು
ಸವಿಯಿರಿ ಅದರ ರುಚಿಯ ಮನದೊಳು
( ಈ ಕವನವನ್ನು ಬರೆದವರು ಸಮೀರ್ ಫ್ರಾನ್ಸಿಸ್ )


No comments: