"We are an Easter People; Alleluia is our Song"
ಬಲು ದೂರ ಹೋದೆ ನಾ ನಿಮ್ಮಿಂದ
ಮಾರು ಹೋಗಿ ಪ್ರಾಪಂಚಿಕ ಸುಖ-ಭೋಗಗಳಿಂದ
ನಾನು ನನ್ನದು ಎಂಬ ಅಹಂಕಾರ ಭಾವದಿಂದ
ಸವೆದೆ ನಾ ಕತ್ತಲೆಯ ಹಾದಿಯ ನನ್ನಿಚ್ಚೆಯಿಂದ
ಆಹಾ! ಬಂದಿತು ಆ ದಿವ್ಯ ತಪಸ್ಸು ಕಾಲ
ಬೆಳಗಿ ಪ್ರಕಾಶಿಸಲು ನನ್ನ ಜೀವನ ಜಾಲ
ಕ್ರಿಸ್ತ ಯಾತನೆಯ ಹೃದಯಾಂತರಾಳದಿ ಸವೆದು
ಧನ್ಯನಾದೆ ಅವರ ಕ್ಷಮಾಪ್ರೀತಿಯ ನೆನೆದು
ಅದೋ ನೋಡು ಚಿಗುರಿತು ಈ ಬಾಳು
ವಸಂತಕಾಲದಿ ಪ್ರಕೃತಿಯು ಚಿಗುರಿದಂತೆ
ಕ್ರಿಸ್ತನೇ ಬಾಳಿಗೆ ದೀಪಸ್ತಂಭ ನಮಗೆಲ್ಲಾ
ಸಾರಿರಿ ಧೈರ್ಯದಿ ಅವರನು ನೀವೆಲ್ಲಾ
ಪ್ರಭುಕ್ರಿಸ್ತರಲ್ಲಿದೆ ನಿತ್ಯ ಜೀವ ..... ಅವರೇ ನಮ್ಮ ಸರ್ವಸ್ವ .....
ಬಲು ದೂರ ಹೋದೆ ನಾ ನಿಮ್ಮಿಂದ
ಮಾರು ಹೋಗಿ ಪ್ರಾಪಂಚಿಕ ಸುಖ-ಭೋಗಗಳಿಂದ
ನಾನು ನನ್ನದು ಎಂಬ ಅಹಂಕಾರ ಭಾವದಿಂದ
ಸವೆದೆ ನಾ ಕತ್ತಲೆಯ ಹಾದಿಯ ನನ್ನಿಚ್ಚೆಯಿಂದ
ಆಹಾ! ಬಂದಿತು ಆ ದಿವ್ಯ ತಪಸ್ಸು ಕಾಲ
ಬೆಳಗಿ ಪ್ರಕಾಶಿಸಲು ನನ್ನ ಜೀವನ ಜಾಲ
ಕ್ರಿಸ್ತ ಯಾತನೆಯ ಹೃದಯಾಂತರಾಳದಿ ಸವೆದು
ಧನ್ಯನಾದೆ ಅವರ ಕ್ಷಮಾಪ್ರೀತಿಯ ನೆನೆದು
ಅದೋ ನೋಡು ಚಿಗುರಿತು ಈ ಬಾಳು
ವಸಂತಕಾಲದಿ ಪ್ರಕೃತಿಯು ಚಿಗುರಿದಂತೆ
ಕ್ರಿಸ್ತನೇ ಬಾಳಿಗೆ ದೀಪಸ್ತಂಭ ನಮಗೆಲ್ಲಾ
ಸಾರಿರಿ ಧೈರ್ಯದಿ ಅವರನು ನೀವೆಲ್ಲಾ
ಪ್ರಭುಕ್ರಿಸ್ತರಲ್ಲಿದೆ ನಿತ್ಯ ಜೀವ ..... ಅವರೇ ನಮ್ಮ ಸರ್ವಸ್ವ .....
No comments:
Post a Comment