Thursday, October 13, 2011

ಅಮ್ಮ, ನೀ ನನ್ನ ಸರ್ವಸ್ವ

ತಾಯಿ ತೋರಿದ ಪ್ರೀತಿಯು ದೇವರ ಪ್ರೀತಿಗೆ ಸಮಾನ ಎಂಬ ಮನೋಭಾವವನ್ನು ನವಶಿಷ್ಯ ಜೋಯಲ್ ಸಂದೀಪ್ ಕವನದ ಮುಖಾಂತರ ಸಾರುತ್ತಾರೆ.

ನಾ
ಉದರದಲ್ಲಿ ಜನ್ಮಪಡೆದಾಗಲಿಂದ
ನಾ ಬೆಳೆದು ದೊಡ್ದವನಾಗುವರೆಗೂ,
ನನಗೆ ಆಸರೆಯಾಗಿ ನಿಲ್ಲುವಳು ಒಬ್ಬಳೇ.
ಅವಳೇ ನನ್ನ ಅಮ್ಮ, ನನ್ನ ಪ್ರೀತಿಯ ತಾಯಿ.

ತನ್ನತನವನ್ನು ಮರೆತು ದುಡಿಯುವಳು;
ತನ್ನ ಮಕ್ಕಳ ಏಳಿಗೆಗಾಗಿ ಅವಳು,
ಕಷ್ಟಗಳನ್ನು ತಾನೆ ನುಂಗಿ ಸುಖವನ್ನು ಕೊಡುತ್ತ,
ಬೆಳೆಸಿದಳು ಅವಳು ನನ್ನನ್ನು ಪ್ರೀತಿಸಿ ಮುದ್ದಾಡುತ್ತಾ.

ಅವಳ ಅಪರಿಮಿತ ಪ್ರೀತಿಗೆ ಪ್ರತಿಯಾಗಿ ನಾನೇನು ಕೊಡಲಿ?
ಅವಳು ತೋರಿದ ಪ್ರೀತಿ ವಾತ್ಸಲ್ಯಕ್ಕೆ ಕೊಡುಗೆಯಾಗಿ,
ಅವಳ ಆಸೆಯನ್ನು ಪೂರೈಸಿ,
ಅವಳ ನಿಸ್ವಾರ್ಥ ಸೇವೆಗೆ ಚಿರಣಿಯಾಗಿ ಬಾಳಿ,
ಅಮ್ಮ ಎಂಬ ಪಾತ್ರಕ್ಕೆ ಮೆರುಗು ನೀಡಬೇಕು.

No comments:

Post a Comment