Saturday, July 16, 2011

ಪ್ರೀತಿಯ ಕಿಡಿಗಳು - Sparks of Love

ಭುವನದಲ್ಲಿ ಜೀವನ ದೇವರು ಕೊಟ್ಟಂತಹ ಪ್ರೀತಿಯ ವರದಾನ
ಹುಡುಕುವೆ
ಏತಕೆ ದೇವನ ಅಲೆಯುವ ಏತಕೆ ಅನುಕ್ಷಣ
ಕಣಕಣದಲ್ಲಿಹುದು ಆತನ ತನುಮನ
ಪ್ರೀತಿಸುವ
ಹೃದಯಕೆ ದ್ವೇಷದ ಹಗೆತನವೇಕೆ?
ಶಾಂತಿ
ಸಾರುವ ಶರೀರಕೆ ಹಿಂಸೆ ನೀಡುವ ದಾಹವೇಕೆ?
ಅಳುವ ಕಣ್ಣಲ್ಲಿ ಕೆಂಪು ಕಣ್ಣೀರು ಬಡವರ ದೀನರ ನಿಟ್ಟುಸಿರು
ಕಣ್ಣಿನ ಕಣ್ಣೀರ ಒರೆಸುವವರಾರು? ಬಡವರ ದೀನರ ಸಂತೈಸುವವರಾರು?
ಯುವಕ ಯುವತಿಯರೇ ನೀವಾಗಿ ಬೆಂಕಿಯ ಕಿಡಿಗಳು
ಪ್ರೀತಿಯ
ಹಂಚಿರಿ ಜಗದೊಳು ಸಮತೆಯ ಸಾರಿರಿ ಲೋಕದೊಳು
ಸವಿಯಿರಿ ಅದರ ರುಚಿಯ ಮನದೊಳು
( ಕವನವನ್ನು ಬರೆದವರು ಸಮೀರ್ ಫ್ರಾನ್ಸಿಸ್ )


No comments:

Post a Comment