Tuesday, April 6, 2010

ಕ್ರಿಸ್ತನಲಿ ಚಿಗುರಿತು ಹೊಸ ಬಾಳು


"We are an Easter People; Alleluia is our Song"
ಬಲು ದೂರ ಹೋದೆ ನಾ ನಿಮ್ಮಿಂದ
ಮಾರು ಹೋಗಿ ಪ್ರಾಪಂಚಿಕ ಸುಖ-ಭೋಗಳಿಂದ
ನಾನು ನನ್ನದು ಎಂಬ ಅಹಂಕಾರ ಭಾವದಿಂದ
ಸವೆದೆ ನಾ ತ್ತಲೆಯ ಹಾದಿಯ ನನ್ನಿಚ್ಚೆಯಿಂದ
ಆಹಾ! ಬಂದಿತು ದಿವ್ಯ ತಪಸ್ಸು ಕಾಲ
ಬೆಳಗಿ ಪ್ರಕಾಶಿಸಲು ನನ್ನ ಜೀವನ ಜಾಲ
ಕ್ರಿಸ್ತ ಯಾತನೆಯ ಹೃದಯಾಂತರಾಳದಿ ಸವೆದು
ಧನ್ಯನಾದೆ ಅವರ ಕ್ಷಮಾಪ್ರೀತಿಯ ನೆನೆದು
ಅದೋ ನೋಡು ಚಿಗುರಿತು ಬಾಳು
ವಸಂತಕಾಲದಿ ಪ್ರಕೃತಿಯು ಚಿಗುರಿದಂತೆ
ಕ್ರಿಸ್ತನೇ ಬಾಳಿಗೆ ದೀಪಸ್ತಂಭ ನಮಗೆಲ್ಲಾ
ಸಾರಿರಿ ಧೈರ್ಯದಿ ಅವರನು ನೀವೆಲ್ಲಾ
ಪ್ರಭುಕ್ರಿಸ್ತರಲ್ಲಿದೆ ನಿತ್ಯ ಜೀವ ..... ಅವರೇ ನಮ್ಮ ಸರ್ವಸ್ವ .....

No comments:

Post a Comment